ಪಾಳಯಗಾರರು

ಪಾಳಯಗಾರರು

೧.೧ ೧ನೇ ಉಪನ್ಯಾಸ

ಮೈಸೂರು ಡಿಸ್ಟ್ರಿಕ್ಟಿನಲ್ಲಿ ತಲಕಾಡೆಂಬ ಒಂದು ಪುಣ್ಯಸ್ಥಳವಿದೆ. ಅದು ಕಾವೇರಿತೀರವಾಗಿದೆ. ತಿರಮಕೂಡಲಲ್ಲಿ ಕಪಿಲಾ ಕಾವೇರಿ ಸಂಗಮವಾಗಿ ಅಖಂಡ ಕಾವೇರಿಯು ತಲಕಾಡಿಗೆ ಹರಿದುಹೋಗುವುದು. ಈ ನದೀತೀರದಲ್ಲಿ ನೀರಿನ ಅಲೆಯಿಂದ ಮರಳು ಬಂದುಬಿದ್ದು ಅದು ಗಾಳಿಯಿಂದ ತೂರಿಕೊಂಡುಬಂದು ಹಲವು ಮೈಲಿಗಳವರೆಗೂ ಮರಳೇ ಮುಚ್ಚಿಕೊಂಡುಹೋಗಿದೆ. ಒಂದೊಂದು ಕಡೆ ಆ ಮರಳು ದೊಡ್ಡ ಬೆಟ್ಟದ ಹಾಗೆ ರಾಸಿಯಾಗಿ ಅಲ್ಲಲ್ಲಿ ಬಿದ್ದಿದೆ. ಇದೆಲ್ಲಾ ಗಜಾರಣ್ಯಕ್ಷೇತ್ರವೆಂದು ಹೆಸರುಗೊಂಡಿರುವುದಾಗಿ ಸ್ಥಳ ಪುರಾಣವಿದೆ. ಈ ಪ್ರದೇಶ ದಲ್ಲಿ ಅನೇಕ ದೇವಸ್ಥಾನಗಳಿದ್ದವಂತೆ. ಅದೆಲ್ಲಾ ಮರಳಿನಲ್ಲಿ ಮುಚ್ಚಿ ಹೋಗಿರುವುದಾಗಿ ತಿಳಿಯಬರುವುದು. ಕೆಲವು ಮಾಸ ತಿಥಿ ವಾರ ನಕ್ಷತ್ರ ಮೊದಲಾದ ಸಂಯೋಗ ಸಂಭವಿಸಿದಾಗ ಅಲ್ಲಿರುವ ಪ್ರಸಿದ್ದ ವಾದ ವೈದ್ಧೇಶ್ವರ, ಮರಳೇಶ್ವರ, ಪಾತಾಳೇಶ್ವರ, ಗೋಕರ್ಣೇಶ್ವರ, ಮಲ್ಲಿಕಾರ್ಜುನೇಶ್ವರ ಎಂಬ ಐದು ಲಿಂಗಗಳನ್ನು ದರ್ಶನಮಾಡಿದರೆ ಬಹಳ ಪುಣ್ಯ ಉಂಟೆಂದು ಹೇಳುತ್ತಾರೆ. ಇಂಥಾ ಸಂಯೋಗವು ೩ ವರುಷಕ್ಕೆ, ೫ ವರುಷಕ್ಕೆ, ೧೨ ವರುಷಕ್ಕೆ ಒಂದೊಂದು ಸಾರಿ ಹೀಗೆ ಬಿಟ್ಟು ಬಿಟ್ಟು ಬರುವುದು. ಜನರು ಅಪಾರವಾಗಿ ಜಾತ್ರೆಗೆ ನೆರೆಯುವರು. ಮುವತ್ತು ನಲವತ್ತು ಸಾವಿರ ಜನದವರೆಗೂ ಸೇರುವುದು. ಈ ದೊಡ್ಡ ಜಾತ್ರೆಗೆ ಪಂಚಲಿಂಗದರ್ಶನವೆಂದು ಹೇಳುವರು. ಈ ಪುಣ್ಯಕ್ಷೇತ್ರದಲ್ಲಿ ಒಂದು ಐತಿಹ್ಯ ಉಂಟು. ಇಲ್ಲಿ ಅನೇಕ ಶಿವ ದೇವಾಲಯಗಳು ಇದ್ದು ಅವುಗಳೆಲ್ಲಾ ಮರಳು ಮುಚ್ಚಿ ಹೋಗಿವೆಯೆಂದು ಹೇಳುತ್ತಾರೆ. ಪೂರ್‍ವದಲ್ಲಿ ಒಬ್ಬ ವ್ಯಾಪಾರಿಯು ಒಂದು ಸೇರು ಕಡಲೆಯನ್ನು ತಂದು ಆ ಪ್ರದೇಶದಲ್ಲಿ ಶಿವದೇವಾಲಯಗಳ ದೇವರ ಮುಂದೆ ಒಂದು ದೇವರಿಗೆ ಒಂದು ಕಡಲೆಯಂತೆ ಇಟ್ಟು ನಿವೇದನ ಮಾಡುತ್ತಾ ಹೋದನಂತೆ. ಕೊನೆಯಲ್ಲಿ ಮಲ್ಲಿಕಾರ್ಜುನೇಶ್ವರನ ಗುಡಿಯ ಬಳಿಗೆ ಬರುವಾಗ ಒಂದು ಕಡಲೆ ಸಾಲದೆಹೋಯಿತಂತೆ, ಆ ದೇವರು ಮುನಿಸಿಕೊಂಡು ನದಿಯ ಆಚೆಹೋಗಿ ವಿಜಾಪುರವೆಂಬ ಊರಲ್ಲಿ ಕೂತುಕೊ೦ಡಿತಂತೆ. ಆ ಹೇರಿನಲ್ಲಿ ಎಷ್ಟು ಕಡಲೇಕಾಳು ಇತ್ತೊ ಅಷ್ಟು ಲಿಂಗಗಳು ಅಲ್ಲಿ ಪ್ರತಿಷ್ಟೆಯಾಗಿದ್ದು ಈಗ ಅದೆಲ್ಲಾ ಮರಳಲ್ಲಿ ಮುಚ್ಚಿಹೋಗಿದೆ ಎಂದು ಹೇಳುತ್ತಾರೆ.

ಈ ಸ್ಥಳೀಯವಾದ ಒಂದು ಐತಿಹ್ಯವನ್ನು ಈ ನಮ್ಮ ಭರತಖಂಡವೆಂಬ ಮಹಾರಾಜ್ಯಕ್ಕೆ ಹೋಲಿಸಿ ಚರಿತ್ರೆ ಎಂಬ ದುರ್ಬನ್ ಅಥವಾ ನಾಳಕಾಯಂತ್ರದಿಂದ ಶೋಧಿಸಿ ನೋಡಿದರೆ, ಇಲ್ಲಿ ಆಳಿದ ದೊರೆಗಳಿಗೆ ಹೆಸರಿಗೊಂದು ಕಡಲೇಕಾಳನ್ನು ನಜರಾಗಿ ಹಾಕುತ್ತಾ ಬಂದಾಗ್ಯೂ ಅಂಥಾ ಕಡಲೆ ಹೇರು ಅನೇಕವಾಗಬಹುದು. ಅಷ್ಟೊಂದು ಜನ ರಾಜರು ಇಲ್ಲಿ ಆಳಿದರು. ಈ ರಾಜರುಗಳಲ್ಲಿ ಕೆಲವರು ದೊಡ್ಡದಾಗಿ ಸೀಮೆಯನ್ನು ಕಟ್ಟಿ ಚಕ್ರಾಧೀಶ್ವರರೆನ್ನಿಸಿಕೊಂಡರು. ಇನ್ನು ಕೆಲವರು ಚಿಕ್ಕ ಚಿಕ್ಕ ರಾಜ್ಯಗಳನ್ನು ಆಳುತಾ ಸ್ವತಂತ್ರರಾಗಿದ್ದರು. ಮತ್ತು ಅವರು ಒಂದೊಂದು ವೇಳೆ ಅಲ್ಲಲ್ಲಿ ಚಕ್ರಾಧೀಶ್ವರರೆನ್ನಿಸಿಕೊಂಡಿದ್ದವರಿಗೆ ವಶವರ್ತಿಗಳಾಗಿ ಆಳಿಕೊಂಡಿದ್ದರು. ಇಂಥಾ ಚಿಕ್ಕ ರಾಜಾಧಿಪತಿಗಳಲ್ಲಿ ಹಲವರಿಗೆ ಈಚೆಗೆ ಪಾಳಯಗಾರರೆಂದು ಹೆಸರು ಬಂದಿದೆ. ಇಂಥಾ ಪಾಳಯಗಾರರ ಸಂಸ್ಥೆಯನ್ನು ಕುರಿತು ಕನ್ನಡಭಾಷೆಯಲ್ಲಿ ಉಪನ್ಯಾಸ ಮಾಡಬೇಕೆಂದು ಮೈಸೂರು ಯೂನಿವರ್ಸಿಟಿ ಎಂಬ ವಿದ್ಯಾ ನಿಲಯದವರು ನನ್ನನ್ನು ನೇಮಕಮಾಡಿದ ಕಾರಣ, ಈ ವಿಷಯದಲ್ಲಿ ನನಗೆ ತಿಳಿದ ಕೆಲವು ಸಂಗತಿಯನ್ನು ತಮಗೆ ಅರಿಕೆ ಮಾಡಿಕೊಳ್ಳುತ್ತೇನೆ, ಸಾವಾಧಾನಚಿತ್ತದಿಂದ ಲಾಲಿಸಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಂಬಿಕೆ ಹುಸಿಯಾಗದಿರಲಿ
Next post ಜಯತು ವಿಶ್ವರೂಪಿಣಿ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys